ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಕಾಣಿಕೆ ‘ಬುಲ್ಬುಲ್ ಚಿತ್ರಕ್ಕೆ ಸ್ವಿಜರ್ಲ್ಯಾಂಡ್ನಲ್ಲಿ ಹದಿನೈದು ದಿನಗಳ ಚಿತ್ರೀಕರಣ ನಡೆದಿದೆ. ಅಲ್ಲಿ ನಡೆದ ಎರಡು ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣದಲ್ಲಿ ಛಾಲೆಂಜಿಂಗ್ಸ್ಟಾರ್ ದರ್ಶನ್, ರಚಿತರಾಂ ಹಾಗೂ ಶರಣ್ ಅಭಿನಯಿಸಿದ್ದರು. ಎರಡು ಹಾಡುಗಳಿಗೆ ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ.
ತೂಗುದೀಪ ಪ್ರೊಡಕ್ಷನ್ಸ್ನ ನಿರ್ಮಾಪಕರಾದ ಶ್ರೀಮತಿ ಮೀನಾತೂಗುದೀಪಶ್ರೀನಿವಾಸ್ ಈ ಹಿಂದೆ ‘ಜೊತೆಜೊತೆಯಲಿ ಹಾಗೂ ‘ನವಗ್ರಹ ಚಿತ್ರಗಳನ್ನು ನಿರ್ಮಿಸಿದ್ದರು. ಈ ಚಿತ್ರಗಳನ್ನು ದಿನಕರ್ ತೂಗುದೀಪ ನಿರ್ದೇಶಿಸಿದ್ದರು. ಸಂಸ್ಥೆಯ ಮೂರನೇ ಕಾಣಿಕೆಯಾದ ‘ಬುಲ್ಬುಲ್ ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶಿಸುತ್ತಿದ್ದಾರೆ.
ತೂಗುದೀಪ ಪ್ರೊಡಕ್ಷನ್ಸ್ನ ಮೊದಲ ಚಿತ್ರ ‘ಜೊತೆಜೊತೆಯಲಿ ಮೂಲಕ ಪ್ರಥಮ ಬಾರಿಗೆ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ ವಿ.ಹರಿಕೃಷ್ಣ ‘ಬುಲ್ಬುಲ್ ಚಿತ್ರಕ್ಕೂ ಸಂಗೀತ ನೀಡಿದ್ದಾರೆ. ಕವಿರಾಜ್ ಗೀತರಚನೆ ಮಾಡುವುದರೊಂದಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಖ್ಯಾತ ಛಾಯಾಗ್ರಾಹಕ ಕೃಷ್ಣಕುಮಾರ್(ಕೆ ಕೆ) ಅವರ ಛಾಯಾಗ್ರಹಣ, ಸೌಂದರರಾಜ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ರಂಗಸ್ವಾಮಿ, ಸುಂದರರಾಜ್ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಅಂಬರೀಶ್, ದರ್ಶನ್, ರಚಿತರಾಂ, ಅಶೋಕ್, ಚಿತ್ರಾಶೆಣೈ, ಶರಣ್, ರಮೇಶ್ಭಟ್, ಸಿಹಿಕಹಿ ಚಂದ್ರು, ಸಾಧುಕೋಕಿಲಾ, ಟೆನ್ನಿಸ್ಕೃಷ್ಣ ಮುಂತಾದವರಿದ್ದಾರೆ.